ಹರಿಭಕ್ತಿಸಾರ: ಹೊಸ ಓದು ವಿಶ್ಲೇಷಣೆ
ಹರಿಭಕ್ತಿಸಾರ: ಹೊಸ ಓದು ವಿಶ್ಲೇಷಣೆ
ಚಿಕ್ಕಮಗಳೂರು ಗಣೇಶ್
Assistant Professor
ಸರ್ಕಾರಿ ಗೃಹವಿಜ್ಞಾನ ಕಾಲೇಜು, ಹೊಳೇನರಸೀಪುರ
Abstract
ಚಳವಳಿಯ ಪರಿಸರದಲ್ಲಿದ್ದೂ ಅಪಾರ ಒಂಟಿತನವನ್ನು ಅನುಭವಿಸಿದ ಕವಿ ಕನಕದಾಸ. ಕನ್ನಡ ಕಾವ್ಯಾಭಿವ್ಯಕ್ತಿಯ ಬಹುಪ್ರಕಾರಗಳಲ್ಲಿ ತನ್ನನ್ನು ತೆರೆದುಕೊಳ್ಳುತ್ತಾ ಹೋಗುವ ಕನಕನ ಕಾವ್ಯಾಭಿವ್ಯಕ್ತಿಗಳಲ್ಲಿ ಒಂದಾದ ಮತ್ತು ಇದುವರೆಗೆ ಹೆಚ್ಚು ಚರ್ಚೆಗೆ ಬಾರದ ಕೃತಿಯೆಂದರೆ ‘ಹರಿಭಕ್ತಿಸಾರ’. ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿರುವ ಪ್ರಕಾರ, ಇದೊಂದು ಭಕ್ತಿಪಾರಾಯಣ ಸ್ವರೂಪದ ಕಾವ್ಯ. ಆದರೆ ಅದರೊಳಗಿನ ‘ಕನಕತನ’ ಕಾಣಿಸುವ ಹಲವು ವಿಶಿಷ್ಟಾಂಶಗಳಿವೆ. ಇಲ್ಲಿ ಕನಕದಾಸ ತಾನು ಒಪ್ಪಿ ಪ್ರತಿಪಾದಿಸಲು ಹೊರಟಿರುವ ಹರಿಕಥೆಯ ಹಿನ್ನೆಲೆಯಲ್ಲಿರುವ ಅಪರಿಮಿತ ದ್ವಂದ್ವಗಳನ್ನು ಕಾಣಿಸುತ್ತಿದ್ದಾನೆ - ತಾನೊಂದು ಕಾವ್ಯಮಾಧ್ಯಮವಾಗಿ. ಅಂದರೆ ಅವನು ಹೇಳಬಯಸಿರುವ ವಿಷ್ಣುಲೀಲಾಕಥನದ ವ್ಯಾಪಕತೆಯೂ, ಸಂಕುಚಿತತೆಯೂ ದ್ವಂದ್ವಾತ್ಮಕವಾಗಿ ಇಲ್ಲಿ ಒಡಬೆರೆತಿದೆ. ಇಂತಹ ಹರಿಕಥನದ ಮಹತ್ವವನ್ನು ಸಾರಲು ಹೊರಟ ಕನಕ ಹಲವು ರೀತಿಯ ದ್ವಂದ್ವಗಳಲ್ಲಿ ಸಿಕ್ಕಿ ತೊಳಲಾಡುತ್ತಾನೆ.ಒಂದು ರೀತಿಯಲ್ಲಿ ಸಂಸ್ಕೃತೀಕರಣಕ್ಕೆ ಅನಿವಾರ್ಯವಾಗಿ ಒಳಗಾಗಿರುವ ಕನಕ, ಯಥಾಸ್ಥಿತಿಯನ್ನು ಬೋಧಿಸುವ ‘ದ್ವೈತ’ ಸಿದ್ಧಾಂತದಲ್ಲಿ ‘ಭಕ್ತಿಸಾರ’ವಾದ ಪ್ರೇಮವನ್ನು ಹುಡುಕಲು ಹೊರಡುವುದೇ ಹಾಸ್ಯಾಸ್ಪದ. ಅದನ್ನು ಭಕ್ತಿಪರವಾಗಿ ನಿರೂಪಿಸುವ ಹೊಣೆ ಹೊತ್ತು ಆತ ಹಲವು ಕಡೆ ಗೊಂದಲದಲ್ಲಿ ಸಿಕ್ಕಿಬೀಳುತ್ತಾನೆ. ತಾನು ಹೇಳಬಯಸಿದ್ದಕ್ಕೆ ತದ್ವಿರುದ್ಧವಾದ ನೆಲೆಗೆ ಹೋಗಿ ಮುಟ್ಟುತ್ತಾನೆ. ಆದರೆ ಅದನ್ನು ಲಘುವಾಗಿಸುವ, ಮೀರುವ, ವಿರೋಧಿಸುವ ತಾಣಗಳಲ್ಲೆಲ್ಲ ಪ್ರೇಮತತ್ವದ ಮಿಂಚುಗಳನ್ನು ಮೂಡಿಸುತ್ತಾನೆ.
ಸಾರಾಂಶ
How to Cite
ಚಿಕ್ಕಮಗಳೂರು ಗಣೇಶ್ (2024). ಹರಿಭಕ್ತಿಸಾರ: ಹೊಸ ಓದು ವಿಶ್ಲೇಷಣೆ. Aray Journal, 1(2), 72-87
Article Information
PDF Access: Restricted
You are not logged in.
Free access to 5 most recent articles.
This article is #31 of 38
Login →
Subscription Plans
PDF Access Restricted
This article is #31 of 38. Please login or subscribe for full access.
This article is in Issue #5 of 6 | Article #31 of 38
Aray Journal | Peer-Reviewed Research Journal
All rights reserved. Reproduction with proper citation is permitted.