Home > Articles > 'ಓದು' ಕಾದಂಬರಿ: ತಾತ್ವ...
🔒 PDF Access Restricted Subscribe Free Plan (5 Articles)
Aray Journal | Research Article Published ARY20260D37D337
Volume 1 (2024) Issue 4 Article 4 of 4 Pages: 63-79

'ಓದು' ಕಾದಂಬರಿ: ತಾತ್ವಿಕ-ಅನುವಾದಿತ ನೆಲೆಗಳ ವಿಶ್ಲೇಷಣೆ

Author:

ಕೆ. ಶಾರದಾ

Institution:

ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ,ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಆಂಧ್ರಪ್ರದೇಶ

Keywords:
ಮಧ್ಯಮವರ್ಗ ತಳಮಧ್ಯಮವರ್ಗ ಸಮಕಾಲೀನತೆ ಸಾಮಾಜಿಕತೆ ಆದರ್ಶ ವೈಚಾರಿಕತೆ ಅನುವಾದದಲ್ಲಿ ಭಾಷೆ ಅನುವಾದ ಮತ್ತು ಮೂಲನಿಷ್ಠತೆ.

Abstract

ತೆಲುಗಿನ ಖ್ಯಾತ ಸಾಹಿತಿ ಕೊಡವಟಿಗಂಟಿ ಕುಟುಂಬ ರಾವ್ ಬರೆದ ‘ಚದುವು’ ಕಾದಂಬರಿಯನ್ನು ಬಿ. ಸುಜ್ಞಾನಮೂರ್ತಿ ಯವರು ಕನ್ನಡಕ್ಕೆ ‘ಓದು’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಚಾರಿತ್ರಿಕ ವಾಸ್ತವತೆಯ ಪ್ರತಿಬಿಂಬದಂತಿರುವ ಈ ಕಾದಂಬರಿಯು ಸಮಕಾಲೀನ ಚಾರಿತ್ರಿಕ ಸಂಗತಿಗಳನ್ನು ಒಳಗು ಮಾಡಿಕೊಳ್ಳುವ ಮೂಲಕ 1915 ರಿಂದ 1934-35ರವರೆಗಿನ ಅಂದರೆ ಸರಿಸುಮಾರು ಎರಡು ದಶಕಗಳ ಕಾಲದ ಭಾರತೀಯ ಮತ್ತು ತೆಲುಗು ನಾಡಿನ ಸಾಮಾಜಿಕ ಸ್ಥಿತ್ಯಂತರಗಳನ್ನು ಹಿಡಿದಿಟ್ಟಿದೆ. ಚರಿತ್ರೆಯನ್ನು ಕಾಲದೇಶಗಳ ಪರಿಣಾಮವೆನ್ನುವ ಸೂಕ್ಷ್ಮ ಹೆಣಿಗೆಗಳ ಮೂಲಕ ನೇಯ್ದಿರುವ ಈ ಕಾದಂಬರಿ ಮಧ್ಯಮ ಹಾಗೂ ತಳಮಧ್ಯಮವರ್ಗಗಳ ಬದುಕನ್ನಾವರಿಸಿದ ಆ ಕಾಲಘಟ್ಟದ ಸಾಂಸ್ಕೃತಿಕ ಸನ್ನಿವೇಶದೊಳಗಿನ ಧ್ವನಿಗಳನ್ನೇ ರೂಪಕಗಳನ್ನಾಗಿಸಿಕೊಂಡಿದೆ. ಚರಿತ್ರೆಯ ನೆರಳಿನ ಚಹರೆಗಳನ್ನು ಶೋಧಿಸುವುದೇ ಸೃಜನಶೀಲ ಬರಹಗಾರನ ಬಹುದೊಡ್ಡ ಹೊಣೆಗಾರಿಕೆ ಎನ್ನುವುದನ್ನು ಈ ಕಾದಂಬರಿ ಆ ಕಾಲದ ಘಟನಾವಳಿಗಳ ಮೂಲಕ ಮತ್ತೆ ಮತ್ತೆ ನೆನಪಿಸುತ್ತದೆ.ನೈಜಾನುಭವಗಳ ಮೂಲಕ ಒಂದು ಕಾಲದ ಬದುಕನ್ನು ಅರ್ಧಶತಮಾನದ ನಂತರ ಕಟ್ಟಿಕೊಡುವಲ್ಲಿ ಕಾದಂಬರಿಕಾರರು ವಸ್ತುನಿಷ್ಠತೆಯ ಜೊತೆಗೆ ಅಂತರ್ದೃಷ್ಟಿ ಮತ್ತು ಸಮಷ್ಟಿ ಪ್ರಜ್ಞೆಗಳನ್ನೂ ಮೈಗೂಡಿಸಿಕೊಂಡಿದ್ದರಿಂದಾಗಿ ಈ ಕಾದಂಬರಿ ತರ್ಕದ ಹಲವು ನೆಲೆಗಳಿಗೆ ಆಸರೆಯನ್ನಿತ್ತಿದೆ. ಸುಪ್ತಪ್ರಜ್ಞೆಯ ಅಂತರಾಳದಿಂದ ಒಡಮೂಡಿದ ಸ್ವಗತವು ಕಾದಂಬರಿಕಾರರ ಸೂಕ್ಷ್ಮ ಸಂವೇದನಾಶೀಲತೆಯನ್ನು, ಸಾಮಾಜಿಕ ಬದುಕನ್ನು ಉನ್ನತೀಕರಿಸಿಕೊಳ್ಳಬೇಕಾದ ಜಿಜ್ಞಾಸೆಯನ್ನು, ಆತ್ಮಸಾಕ್ಷಿಯನ್ನೊಳಗೊಂಡ ವೈಚಾರಿಕತೆಯ ಹಲವು ಆಯಾಮಗಳನ್ನು ಆ ಸಂದರ್ಭದ ಬದುಕಿನೊಂದಿಗೆ ಸಮೀಕರಿಸಿದೆ.ಈ ಎಲ್ಲ ಕಾರಣಗಳಿಂದಾಗಿ ಈ ಕಾದಂಬರಿಯು ವಿಶಿಷ್ಟವಾದ ತಾತ್ವಿಕ ಚೌಕಟ್ಟನ್ನು ರೂಪಿಸಿಕೊಂಡಿದೆ. ಅಂತಹ ತಾತ್ವಿಕ ಚೌಕಟ್ಟಿನ ಅಂತರಂಗವನ್ನು ಶೋಧಿಸುವುದೇ ಈ ಲೇಖನದ ಪ್ರಧಾನ ಆಶಯ. ಜೊತೆಗೆ ತೆಲುಗಿನಿಂದ ಕನ್ನಡೀಕರಣಗೊಂಡ ಕಾದಂಬರಿಯ ಸ್ವರೂಪವನ್ನು ಅರಿಯುವುದು ಸಹ ಈ ಬರಹದ ಮತ್ತೊಂದು ಉದ್ದೇಶ.

ಸಾರಾಂಶ

How to Cite

ಕೆ. ಶಾರದಾ (2024). 'ಓದು' ಕಾದಂಬರಿ: ತಾತ್ವಿಕ-ಅನುವಾದಿತ ನೆಲೆಗಳ ವಿಶ್ಲೇಷಣೆ. Aray Journal, 1(4), 63-79

Article Information

Article ID: ARY-0023
Code: ARY20260D37D337
Volume: Volume 1 (2024)
Issue: Issue 4
Article #: 4 of 4
Author: ಕೆ. ಶಾರದಾ
Published: 10 Jul 2024
Pages: 63-79
Views: 84
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #21 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #21 of 38. Please login or subscribe for full access.

This article is in Issue #3 of 6 | Article #21 of 38

Aray Journal | Peer-Reviewed Research Journal

All rights reserved. Reproduction with proper citation is permitted.