ಕೋಲಾರ ಜಿಲ್ಲೆಯ ಕೇಳಿಕೆಗಳ ವೈಶಿಷ್ಟ್ಯತೆ
ಕೋಲಾರ ಜಿಲ್ಲೆಯ ಕೇಳಿಕೆಗಳ ವೈಶಿಷ್ಟ್ಯತೆ
ನಟರಾಜ ಬಿ.ಎನ್
Abstract
ಕೋಲಾರ ಜಿಲ್ಲೆಯ ಬಯಲಾಟ ಪರಂಪರೆಯಲ್ಲಿ ಕೇಳಿಕೆ ಒಂದು ವಿಶಿಷ್ಟ ಜನಪದ ರಂಗಪ್ರಕಾರವಾಗಿ ಗುರುತಿಸಿಕೊಂಡಿದೆ. ಆಂಧ್ರಪ್ರದೇಶದ ಕುಪ್ಪಂ ಭಾಗದಿಂದ ಪ್ರಾರಂಭಗೊಂಡ ಈ ಕಲೆಯು ಕೋಲಾರ ಜಿಲ್ಲೆಯ ಗಡಿಭಾಗಗಳಲ್ಲಿ ಜನಪರಂಪರೆಯ ಒಂದು ಜೀವಂತ ಅಂಶವಾಗಿ ಬೆಳೆಯಿತು. ಕೇಳಿಕೆ ಪದವು ಕೇಳಿಸಿಕೊಳ್ಳುವುದು, ಹೇಳಿಸಿಕೊಳ್ಳುವುದು ಎಂಬ ಅರ್ಥದಲ್ಲಿ ರೂಪಗೊಂಡು ನೃತ್ಯ, ಸಂಗೀತ, ಅಭಿನಯ, ಕಥನಗಳ ಸಂಯೋಜಿತ ಕಲೆಯಾಗಿದೆ. ವಚನ ಸಾಹಿತ್ಯ, ಹರಿಹರನ ರಗಳೆ, ತೆಲುಗಿನ ಬಸವಪುರಾಣ, ಕನಕದಾಸರ ಕೀರ್ತನೆಗಳಲ್ಲಿ ಕೇಳಿಕೆಯ ಉಲ್ಲೇಖಗಳು ದೊರೆಯುತ್ತವೆ. ಈ ಕಲೆಯಲ್ಲಿ ಪೌರಾಣಿಕ ಹಾಗೂ ದೇಶೀ ಕಥೆಗಳು-ಬಾಲನಾಗಮ್ಮ, ದೇಶಿಂಗರಾಜು ಕಥೆ, ಸಾಸುಲು ಚಿನ್ನಮ್ಮ, ಮುಗ್ಗುರು ಮರಾಠಿಲು ಮುಂತಾದವುಗಳು- ಜನಪದ ನೈತಿಕತೆ, ಸ್ನೇಹ, ತಾಯ್ತನ, ಶೌರ್ಯ, ಧರ್ಮ ಮತ್ತು ಮಾನವೀಯ ಮೌಲ್ಯಗಳ ಪ್ರಸಾರಕರಾಗಿವೆ. ಕೇಳಿಕೆ ಕಲೆಯು ವಾದ್ಯ, ವೇಷಭೂಷಣ, ರಂಗವಿನ್ಯಾಸ, ಪಾತ್ರಾಭಿನಯಗಳ ಮೂಲಕ ಗ್ರಾಮೀಣ ಸಮಾಜದ ನೈತಿಕ ಹಾಗೂ ಸಾಂಸ್ಕೃತಿಕ ಜೀವನವನ್ನು ಶ್ರೀಮಂತಗೊಳಿಸಿದೆ. ಇಂದಿನ ಜಾಗತೀಕರಣ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಈ ಜನಪದ ರಂಗಪ್ರಕಾರ ನಾಶದ ಅಂಚಿನಲ್ಲಿದ್ದರೂ, ಅದು ಜನಪದ ಸಂಸ್ಕೃತಿಯ ಅಮೂಲ್ಯ ಪಾರಂಪರ್ಯವೆಂಬ ಸ್ಥಾನವನ್ನು ಉಳಿಸಿಕೊಂಡಿದೆ.
ಸಾರಾಂಶ
How to Cite
ನಟರಾಜ ಬಿ.ಎನ್ (2025). ಕೋಲಾರ ಜಿಲ್ಲೆಯ ಕೇಳಿಕೆಗಳ ವೈಶಿಷ್ಟ್ಯತೆ. Aray Journal, 2(7), 118-130. DOI: 10.xxxx/aray.2025.7
Article Information
PDF Access: Granted
You are not logged in.
Free access to 5 most recent articles.
Login →
Subscription Plans
Full Article PDF
Aray Journal | Peer-Reviewed Research Journal
All rights reserved. Reproduction with proper citation is permitted.