ಅಕ್ಕನ ಒಲುಮೆ
ಅಕ್ಕನ ಒಲುಮೆ
ರವಿಶಂಕರ್ ಎ.ಕೆ
Assistant Professor
ಕನ್ನಡ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ, ಕೆ. ನಾರಾಯಣಪುರ, ಬೆಂಗಳೂರು - 560077
Abstract
ಈ ಮನಸ್ಸು, ದೇಹ ಎಲ್ಲವೂ ಲೌಕಿಕ ತೊಡಕುಗಳಾದ ಕಾರಣ, ಮನದ ಮನವಾದ ಆತ್ಮವನ್ನು ಅಕ್ಕನು ಸದಾ ಬಯಸುತ್ತಾಳೆ. ಅದು ಬರಿ ಮನಸ್ಸಲ್ಲ. ಈ ಮನಸ್ಸಿಗೆ ಐಹಿಕ ಸಂಬಂಧವೇ ಹೆಚ್ಚು. ಆ ಮನವನ್ನೂ ಮೀರುವ ಆತ್ಮವೊಂದೂ ನಮ್ಮಲ್ಲಿ ಅಡಗಿರುತ್ತದೆ. ಅದು ಸದಾ ಸತ್ಯದ ಬೆಳಕನ್ನು ದರ್ಶನ ಮಾಡಿಸುತ್ತದೆ. ನಾವು ಅದನ್ನು ನಂಬುವುದಿಲ್ಲ. ಏಕೆಂದರೆ, ನಮಗೆ ಈ ಲೌಕಿಕ ಸುಖಗಳು ಅದರಿಂದ ಸಿಗಲಾರವು. ಆ ಕಾರಣದಿಂದ ಅಲೌಕಿಕ ತಾಣವಾದ ಮನೋಚೈತನ್ಯ ಆತ್ಮವನ್ನು ಕೈಬಿಡುತ್ತೇವೆ. ನಡೆ-ನುಡಿ ಶುದ್ಧತೆಯ ಕುರಿತು ಈ ಕಾರಣದಿಂದಲೇ ಶರಣ ತತ್ವವನ್ನು ವಚನಕಾರರು ನಿರೂಪಿಸಿದರು. ಅಕ್ಕನ ಧೈರ್ಯ ನುಡಿಯೊಂದು ಹೀಗಿದೆ. ‘ನಾಳೆ ಬರುವುದು ನಮಗಿಂದೇ ಬರಲಿ, ಇಂದು ಬರುವುದು ನಮಗೀಗಲೇ ಬರಲಿ; ಆಗೀಗ ಎನ್ನದಿರೋ, ಚೆನ್ನಮಲ್ಲಿಕಾರ್ಜುನಾ.(253)’ ಎನ್ನುವಾಗ ಲೌಕಿಕ ಕ್ಷಣಿಕವನ್ನು ದರ್ಶನಮಾಡಿಸುತ್ತಾರೆ. ಈ ಲೌಕಿಕವು ಬಾಹ್ಯ ಹುಡುಕಾಟದಿಂದ ಕೂಡಿರುವ ಕಾರಣ ‘ಉಸಿರಿನ ಪರಿಮಳ’ವನ್ನು ಅಕ್ಕನು ಅಪೇಕ್ಷಿಸಿದ್ದಾಳೆ. ಅದುವೇ ಆತ್ಮ ಸಂಗಾತದ ಕ್ಷಣ. ಈ ಹಿನ್ನೆಲೆಯಲ್ಲಿ ಲೌಕಿಕದ ಅರ್ಥದಲ್ಲಿ ಅಲೌಕಿಕತೆಯನ್ನು ಸಾರುವ ಕೆಲವು ವಚನಗಳನ್ನು ನಿರ್ವಚಿಸುವ ಮೂಲಕ ಅಕ್ಕಮಹಾದೇವಿಯನ್ನು ಇನ್ನಷ್ಟು ಅರಿಯುವ ಪ್ರಯತ್ನವನ್ನು ಈ ಲೇಖನದ ಮೂಲಕ ಕಂಡುಕೊಳ್ಳಬಹುದು. ಲೌಕಿಕದ ಅರ್ಥದಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಹಲವು ವಚನಗಳಿವೆ. ಈ ಅರ್ಥದಲ್ಲಿ ನನ್ನ ಲೇಖನವನ್ನು ವಿವರಿಸುತ್ತಿಲ್ಲ. ಇಂತಹ ಯಾವುದೇ ವಚನಗಳನ್ನು ಕಾಣುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.
ಸಾರಾಂಶ
How to Cite
ರವಿಶಂಕರ್ ಎ.ಕೆ (2025). ಅಕ್ಕನ ಒಲುಮೆ. Aray Journal, 2(5), 44-52. DOI: 10.xxxx/aray.2025.5
Article Information
PDF Access: Restricted
You are not logged in.
Free access to 5 most recent articles.
This article is #13 of 38
Login →
Subscription Plans
PDF Access Restricted
This article is #13 of 38. Please login or subscribe for full access.
This article is in Issue #2 of 6 | Article #13 of 38
Aray Journal | Peer-Reviewed Research Journal
All rights reserved. Reproduction with proper citation is permitted.