ಮಧ್ಯ ಕರ್ನಾಟಕ ಭಾಗದ ಬಯಲಾಟದ ಸ್ವರೂಪ ಮತ್ತು ಬಯಲಾಟದ ನೆಲೆಗಳು
ಮಧ್ಯ ಕರ್ನಾಟಕ ಭಾಗದ ಬಯಲಾಟದ ಸ್ವರೂಪ ಮತ್ತು ಬಯಲಾಟದ ನೆಲೆಗಳು
ಚಿಕ್ಕಣ್ಣ ಎಣ್ಣೆಕಟ್ಟೆ
Abstract
ಮಧ್ಯ ಕರ್ನಾಟಕದ ತುಮಕೂರು, ಮೈಸೂರು, ಚಿತ್ರದುರ್ಗ, ಕೋಲಾರ, ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಹಾಸನ, ಚಾಮರಾಜನಗರ, ದಾವಣಗೆರೆ ಭಾಗಗಳಲ್ಲಿ ಬಯಲಾಟ ಕಲೆ ಬಹುಪ್ರಾಚೀನ, ಜನಪದ ಹಾಗೂ ಸಮೂಹಿಕ ಚಟುವಟಿಕೆ ಆಗಿದ್ದು, ಇದನ್ನು ಬಯಲುಕಥೆ, ಬಯಲಾಟ, ಕುಣಿಯೋಮೇಳ, ಅಟ್ಟದಾಟ ಎಂಬ ಪರ್ಯಾಯ ಹೆಸರಿನಿಂದ ಕರೆಯಲಾಗುತ್ತದೆ. ಈ ಕಲೆಯಲ್ಲಿ ನೃತ್ಯ, ಸಂಗೀತ, ಮಾತುಗಾರಿಕೆ, ಮುಖವೀಣೆ, ಮೃದಂಗ, ತಾಳ, ಶ್ರುತಿಪೆಟ್ಟಿಗೆ ಮತ್ತು ಆಕರ್ಷಕ ವೇಷಭೂಷಣಗಳೊಂದಿಗೆ ವೈವಿಧ್ಯಮಯ ಕಲಾತ್ಮಕತೆಯು ಕಾಣಿಸುತ್ತದೆ. ಭಾಗವತರು ಪಾತ್ರಧಾರರೊಂದಿಗೆ ಮೌಖಿಕವಾಗಿ ಪದ್ಯಗಳನ್ನು ಕಲಿತಿರುವುದು, ಶೈಲಿವೈವಿಧ್ಯತೆಯ ರಾಗಗಳ (ಕಂದ, ಭಾಮಿನಿ, ಯಾಲಪದ, ಕಾವೇರಿ, ಭೈರವಿರಾಗ ಇತ್ಯಾದಿ)ಗಳೊಂದಿಗೆ ಅಭಿನಯಿಸುವುದು ವಿಶೇಷ. ಬಯಲಾಟವು ದೇವಾಲಯದ ಮಂಟಪದಿಂದ ಬೇರೆಯಾದ, ಜನಪರ, ವಾಸ್ತವ ರಂಗ ಮಾದರಿಯಾಗಿದೆ. ಮಧ್ಯ ಕರ್ನಾಟಕದ ಬಯಲಾಟವು ಉತ್ತರ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಯಕ್ಷಗಾನದಿಂದ ಸ್ವರೂಪದಲ್ಲಿ ಭಿನ್ನವಾಗಿದೆ. ಭಾಗವತರಿಗೆ ಶ್ರುತಿ ವಾದ್ಯವಾಗಿ ಮುಖವೀಣೆ ಮುಖ್ಯವಾಗಿದ್ದು, ರಸ ಭಾವಗಳಾದ ರೌದ್ರ, ಕರುಣ, ಶೃಂಗಾರ, ವೀರದ ಮೂಲಕ ಪ್ರಸಂಗಗಳನ್ನು ಪ್ರೇಕ್ಷಕರಿಗೆ ಮನನೀಯವಾಗಿ ತಂದುಕೊಡುತ್ತಾರೆ. ಇಂದಿನ ಇತ್ತೀಚಿನ ಸಂದರ್ಭದಲ್ಲಿ ಈ ಕಲೆಯನ್ನು ಮೂಡಲಪಾಯ ಬಯಲಾಟ/ಮೂಡಲಪಾಯ ಬಯಲುಕಥೆ ಎಂದು ಗುರುತಿಸುತ್ತಾರೆ.
ಸಾರಾಂಶ
How to Cite
ಚಿಕ್ಕಣ್ಣ ಎಣ್ಣೆಕಟ್ಟೆ (2025). ಮಧ್ಯ ಕರ್ನಾಟಕ ಭಾಗದ ಬಯಲಾಟದ ಸ್ವರೂಪ ಮತ್ತು ಬಯಲಾಟದ ನೆಲೆಗಳು. Aray Journal, 2(6), 49-87. DOI: 10.xxxx/aray.2025.6
Article Information
PDF Access: Granted
You are not logged in.
Free access to 5 most recent articles.
Login →
Subscription Plans
Full Article PDF
Aray Journal | Peer-Reviewed Research Journal
All rights reserved. Reproduction with proper citation is permitted.