ಮಿಶೆಲ್ ಫೂಕೋ ಮತ್ತು ಜ್ಞಾನೋದಯದ ನೈತಿಕ ಬಲತ್ಕಾರ: ವಿಮರ್ಶೆ, ಅಧಿಕಾರ ಮತ್ತು ಆಧುನಿಕತೆ
ಮಿಶೆಲ್ ಫೂಕೋ ಮತ್ತು ಜ್ಞಾನೋದಯದ ನೈತಿಕ ಬಲತ್ಕಾರ: ವಿಮರ್ಶೆ, ಅಧಿಕಾರ ಮತ್ತು ಆಧುನಿಕತೆ
ಡಾ. ಮಲ್ಲೇಶಪ್ಪ ಸಿದ್ರಾಮಪುರ
Assistant Professor
Dravid University
Abstract
ಮಿಶೆಲ್ ಫೂಕೋ ಅವರ "ಜ್ಞಾನೋದಯ ಎಂದರೇನು?" ಪ್ರಬಂಧವು ಇಮ್ಯಾನುಯೆಲ್ ಕಾಂಟ್‌ನ ವಿಚಾರಗಳೊಂದಿಗೆ ಮುಖಾಮುಖಿಯಾಗುವ ಮೂಲಕ ಜ್ಞಾನೋದಯ, ಆಧುನಿಕತೆ ಮತ್ತು ಆಧುನಿಕೋತ್ತರದ ಛೇದಕಗಳನ್ನು ವಿಶ್ಲೇಷಿಸುತ್ತದೆ. ಬೋದಿಲೇರ್‌ನ ಪ್ರಭಾವದಿಂದ ಆಧುನಿಕತೆಯನ್ನು ಸ್ವಯಂ-ವ್ಯಕ್ತಿತ್ವೀಕರಣವೆಂದು ವ್ಯಾಖ್ಯಾನಿಸುವ ಫೂಕೋ, ಜ್ಞಾನೋದಯದ ದ್ವಂದ್ವಗಳನ್ನು ವಿಧೇಯತೆ ಮತ್ತು ತರ್ಕದ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾನೆ. ಬೋದಿಲೇರ್‌ನ ದೃಷ್ಟಿಕೋನಗಳಿಂದ ಪ್ರಭಾವಿತಗೊಂಡು ಆಧುನಿಕತೆಯನ್ನು ಸ್ವಯಂಸಿದ್ಧ ವ್ಯಕ್ತಿತ್ವೀಕರಣ ಮತ್ತು ಪರಿವರ್ತನಶೀಲ ಕ್ರಿಯೆಯೆನ್ನುತ್ತಾನೆ. ಅದರ ಆದರ್ಶಗಳ ಸೂಕ್ಷ್ಮವಾದ ವಿಚಾರವನ್ನು ಪ್ರತಿಪಾದಿಸುತ್ತಾ, ಸರಳವಾದ ದ್ವಂದ್ವಗಳನ್ನು ತಿರಸ್ಕರಿಸಿ ಚಿಂತನಾಶೀಲ ಸ್ವಯಂ ವಿಶ್ಲೇಷಣೆಯನ್ನು ಮಂಡಿಸುತ್ತಾನೆ.ಆತನ ಈ ವಿಧಾನವು ಪರಂಪರಾಗತ ವಿಮರ್ಶೆಯ ಚಾರಿತ್ರಿಕ ಅನಿಶ್ಚಿತತೆಗಳನ್ನು ಒತ್ತಿ ಹೇಳುತ್ತದೆ ಮತ್ತು ಹೆಚ್ಚಿನ ಸ್ವೇಚ್ಛೆಯೆಡೆಗಿನ ಭಿನ್ನ ಮಾರ್ಗಗಳನ್ನು ಅನ್ವೇಷಿಸುತ್ತದೆ. ಕಾಂಟ್‌ನ ನಿರಂತರ ಪ್ರಶ್ನೆಗಳನ್ನೇ ಫೂಕೋ ಸ್ವ-ಪರೀಕ್ಷೆ ಮತ್ತು ಸ್ವಾಯತ್ತತೆಯ ಅನ್ವೇಷಣೆಗಾಗಿ ವೈಧಾನಿಕತೆಯ ಚೌಕಟ್ಟನ್ನಾಗಿಸಿಕೊಳ್ಳುತ್ತಾನೆ. ಈ ಲೇಖನವು ಫೂಕೋನ ತತ್ವಶಾಸ್ತ್ರೀಯ ದೃಷ್ಟಿಕೋನದ ಮೂಲಕ ‘ಜ್ಞಾನೋದಯ’ ಮತ್ತು ‘ಆಧುನಿಕತೆ’ಯ ಒಳನೋಟಗಳನ್ನು ಪರಾಮರ್ಶಿಸುತ್ತದೆ.
ಸಾರಾಂಶ
How to Cite
ಡಾ. ಮಲ್ಲೇಶಪ್ಪ ಸಿದ್ರಾಮಪುರ (2024). ಮಿಶೆಲ್ ಫೂಕೋ ಮತ್ತು ಜ್ಞಾನೋದಯದ ನೈತಿಕ ಬಲತ್ಕಾರ: ವಿಮರ್ಶೆ, ಅಧಿಕಾರ ಮತ್ತು ಆಧುನಿಕತೆ. Aray Journal, 1(2), 23-35
Article Information
PDF Access: Restricted
You are not logged in.
Free access to 5 most recent articles.
This article is #34 of 38
Login →
Subscription Plans
PDF Access Restricted
This article is #34 of 38. Please login or subscribe for full access.
This article is in Issue #5 of 6 | Article #34 of 38
Aray Journal | Peer-Reviewed Research Journal
All rights reserved. Reproduction with proper citation is permitted.